image

Principal's Desk

ಡಾ.ಎಸ್.ಎಲ್.ಮಂಜುನಾಥ್, ಸಹ ಪ್ರಾಧ್ಯಾಪಕ & ಮುಖ್ಯಸ್ಥರು,ಕನ್ನಡ ವಿಭಾಗ, ವಿಜಯ ಕಾಲೇಜು, ಜಯನಗರ,ಬೆಂಗಳೂರು. 30 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ದ್ರಾವಿಡ ವಿಶ್ವವಿದ್ಯಾನಿಲಯದಿಂದ ಹನುಮ ಒಂದು ಸಾಂಸ್ಕ್ರತಿಕ ಅಧ್ಯಯನಕ್ಕೆ ಪಿಎಚ್ಡಿ ಪದವಿ. ಸಿಬಿಎಸ್ ಇ, ಐಸಿಎಸ್ ಇ ಶಾಲೆಗಳಲ್ಲಿ ಕನ್ನಡ ಪಠ್ಯಪುಸ್ತಕಗಳಾಗಿರುವ ಕನ್ನಡ ರತ್ನ, ನಮ್ಮ ಕನ್ನಡ, ಕನ್ನಡ ಕಾವೇರಿಗೆ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಣೆ.ಬೆಂಗಳೂರು ವಿಶ್ವವಿದ್ಯಾನಿಲಯದ ಬಿಎಸ್ಸಿ ಕನ್ನಡ ಪಠ್ಯ ಪುಸ್ತಕವಾಗಿರುವ ಸುವರ್ಣಸಂಪದಕ್ಕೆ .ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ 2021-22 ನೇ ಸಾಲಿನ Isem& II sem BBA ಕನ್ನಡ ಭಾಷಾ ಪಠ್ಯಪುಸ್ತಕ ಹಾಗೂ III & IV sem BBA ಕನ್ನಡ ಭಾಷಾ ಪಠ್ಯಪುಸ್ತಕ, Functional Kannada, ಕನ್ನಡ ಓಪನ್ ಎಲೆಕ್ಟೀವ್ ಆತ್ಮ ಕಥನ ಪಠ್ಯಪುಸ್ತಕಗಳಿಗೆ ಸಂಪಾದಕರಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ವಿಮರ್ಶಾ ಲೇಖನಗಳನ್ನು ,ಕವಿತೆಗಳನ್ನು ರಚಿಸಿದ್ದಾರೆ. ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. 2018 ರಿಂದ ವಿಜಯ ಕಾಲೇಜು ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳಾಗಿ ನಿರ್ವಹಣೆ. ಡಾ.ರಾಧಕೃಷ್ಣನ್ ಪ್ರಶಸ್ತಿ. ಕುವೆಂಪು ಪ್ರಶಸ್ತಿ, ಹಾಗೂ ಇವರ ಹನುಮ ಒಂದು ಸಾಂಸ್ಕೃತಿಕ ಅಧ್ಯಯನ ಕೃತಿಗೆ ಸರ್ ಎಂ ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಪ್ರಶಸ್ತಿ ಬಂದಿದೆ.ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಶಾಲಾ ಶಿಕ್ಷಕರಿಗೆ ಕನ್ನಡ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಹಲವಾರು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ. NIVS ಸಂಸ್ಥೆಗೆ Deputy director ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆ ವಿಜಯ ಸಂಜೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.Dr. S.L. MANJUNATH M.A., B.Ed., Ph.D., Principal, VIjaya Evening PU College

<